|
ಸಕಲ ಅನುಕೂಲತೆಗಳಿರುವ ಸುಂದರ ಛತ್ರ
ಅತ್ತಿಗುಪ್ಪೆಯ ಶ್ರೀಮತಿ ಬಚ್ಚಮ್ಮ ಮತ್ತು ಶ್ರೀ ಅಪ್ಪಯ್ಯಣ್ಣ ಕಲ್ಯಾಣ ಮಂಟಪ
|
ರಿಸೆಪ್ಷೆನ್ ಹಾಲ್ ನ ಆಸನಗಳ
ಸಾಮರ್ಥ್ಯ |
800
|
|
ಊಟದ ಹಾಲ್ ನ
ಆಸನಗಳ ಸಾಮರ್ಥ್ಯ
|
400
|
|
ಒಟ್ಟು ರೂಂಗಳ ಸಂಖ್ಯೆ
8,
ಈ ಪೈಕಿ ವಧೂವರರಿಗೆ ಎರಡು ವಿಶೇಷ ರೂಂಗಳಿವೆ
|
ಅತ್ತಿಗುಪ್ಪೆ
ಬೆಂಗಳೂರು ನಗರದ ಅತ್ಯಂತ ಹಳೆಯ ಪ್ರದೇಶ. ವಿಜಯನಗರ ಹಾಗೂ ಬ್ಯಾಟರಾಯನಪುರದ
ನಡುವೆ ಇರುವ ಈ ಪ್ರದೇಶದಲ್ಲಿ ಪಟೇಲರಾಗಿದ್ದ ಶ್ರೀ ಮುನಿಭೈರಪ್ಪನವರು ಮದುವೆ,
ಮುಂಜಿ ಇತ್ಯಾದಿ ಶುಭ ಕಾರ್ಯ ಮಾಡ ಬಯಸುವ ಅತ್ತಿಗುಪ್ಪೆ,
ವಿಜಯನಗರ, ಚಂದ್ರಾಲೇಔಟ್,
ಬ್ಯಾಟರಾಯನಪುರ ಹಾಗೂ ಸುತ್ತಮುತ್ತಲ ಪ್ರದೇಶದ ಜನರಿಗೆ ಸಕಲ
ಅನುಕೂಲತೆ ಕಲ್ಪಿಸುವ ಮಹತ್ವಾಕಾಂಕ್ಷೆಯೊಂದಿಗೆ ನಿರ್ಮಿಸಿದ ಸುಸಜ್ಜಿತ ಕಲ್ಯಾಣ
ಮಂಟಪವೇ ಶ್ರೀಮತಿ ಬಚ್ಚಮ್ಮ ಮತ್ತು ಶ್ರೀ ಪಟೇಲ್ ಅಪ್ಪಯ್ಯಣ್ಣ ಕಲ್ಯಾಣ ಮಂಟಪ
(ಶ್ರೀಮತಿ ಮತ್ತು ಶ್ರೀಅಪ್ಪಯ್ಯಣ್ಣ ಕಲ್ಯಾಣ ಮಂಟಪ).
೧೯೮೭ರ ಮಾರ್ಚ್ ೨ರಂದು ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಬಾಲಗಂಗಾಧರನಾಥ
ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ,
ಶಾಸಕರಾಗಿದ್ದ ಶ್ರೀ ಜಿ. ನಾರಾಯಣ ಕುಮಾರ್ ಅವರ
ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅಂದಿನ ಲೋಕೋಪಯೋಗಿ ಸಚಿವ ಶ್ರೀ
ಎಚ್.ಡಿ. ದೇವೇಗೌಡ ಅವರು ಉದ್ಘಾಟಿಸಿದ ಈ ಕಲ್ಯಾಣ ಮಂಟಪ ವಿವಾಹಾದಿ ಶುಭಕಾರ್ಯ
ಮಾಡುವವರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ವಿಶಾಲವಾದ ರಿಸೆಪ್‌ಷನ್
ಹಾಲ್‌ನಲ್ಲಿ ೮೦೦ ಆಸನಗಳ ಸಾಮರ್ಥ್ಯ ಹೊಂದಿದ್ದು,
ಗಾಳಿ ಬೆಳಕಿನಿಂದ ಕೂಡಿದ ಡೈನಿಂಗ್ ಹಾಲ್‌ನಲ್ಲಿ ಏಕಕಾಲದಲ್ಲಿ ೪೦೦ ಮಂದಿ ಊಟ
ಮಾಡುವ ವ್ಯವಸ್ಥೆ ಇದೆ.
ಕಲ್ಯಾಣ ಮಂಟಪದಲ್ಲಿ ಒಟ್ಟು ೮ ರೂಂಗಳಿದ್ದು,
ಇವುಗಳಲ್ಲಿ ವಧೂವರರಿಗಾಗಿ ೨ ವಿಶೇಷ ರೂಂಗಳು ಮೀಸಲಾಗಿವೆ.
ಪ್ರತ್ಯೇಕ ಶೌಚಾಲಯ ಹಾಗೂ ಸ್ನಾನಗೃಹ, ಶುದ್ಧ
ಕುಡಿಯುವ ನೀರು, ವಿದ್ಯುತ್ ಸಂಪರ್ಕ ಜೊತೆಗೆ
ಜನರೇಟರ್ ಸೌಲಭ್ಯವೂ ಇಲ್ಲಿದೆ. ಕಲ್ಯಾಣ ಮಂಟಪದ ಆಡಳಿತ ಮಂಡಳಿ ಈ ಛತ್ರದಲ್ಲಿ
ಶುಭಕಾರ್ಯ ಮಾಡುವವರಿಗೆ ಜಮಖಾನ, ವರನಿಗೆ ತೊಡಿಸುವ
ಪೇಟ, ಪೂಜಾ ಸಾಮಾನುಗಳು,
ತಾಂಬೂಲದ ಟೇಬಲ್, ಒಂದು ಸಾವಿರ
ಜನರಿಗೆ ಅಡುಗೆ ಮಾಡಲು ಸಾಕಾಗುವಷ್ಟು ಪಾತ್ರೆ ಸಾಮಾನು,
ಗ್ರೈಂಡರ್, ಇತ್ಯಾದಿ
ಅನುಕೂಲತೆಗಳನ್ನೂ ಒದಗಿಸುತ್ತದೆ. ಮಂಗಳವಾದ್ಯಹಾಗೂ ಪುಷ್ಪಾಲಂಕಾರ,
ಹಾಲು ಇತ್ಯಾದಿ ಅವಶ್ಯಕತೆಗಳಿಗೂ ನೆರವಾಗುತ್ತದೆ. ವಾಹನ
ನಿಲ್ಲಿಸಲೂ ಇಲ್ಲಿ ಸ್ಥಳಾವಕಾಶವಿದೆ.
ವಿಶಾಲವಾದ ಹಜಾರ,
ಸುಂದರ ವಿನ್ಯಾಸ ಹೊಂದಿರುವ ಈ ಛತ್ರದ ಸೊಬಗು ರಾತ್ರಿಯ
ವೇಳೆ ವಿದ್ಯುತ್ ದೀಪಾಲಂಕಾರದಲ್ಲಿ ಮತ್ತಷ್ಟು ಹೆಚ್ಚುತ್ತದೆ. ಛತ್ರಕ್ಕೆ
ಕಾಲ್ನಡಿಗೆಯ ದೂರದಲ್ಲಿ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ಸನ್ನಿ ಇದ್ದು,
ದೇವತಾ ಕಾರ್ಯ ಮಾಡುವವರಿಗೆ ಅನುಕೂಲಕರವಾಗಿದೆ. ಸಕಲ
ಅನುಕೂಲತೆಗಳಿರುವ ಈ ಕಲ್ಯಾಣ ಮಂಟಪದ ಹೆಚ್ಚಿನ ವಿವರಗಳಿಗೆ ಈ ಕೆಳಕಂಡ ವಿಳಾಸ
ಹಾಗೂ ದೂರವಾಣಿ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.
ಶ್ರೀಮತಿ ಮತ್ತು ಶ್ರೀ ಅಪ್ಪಯ್ಯಣ್ಣ ಕಲ್ಯಾಣ ಮಂಟಪದ ಪೂರ್ಣ ವಿಳಾಸ:
ನಂ. ೧೧,
೨ನೇ ಮುಖ್ಯರಸ್ತೆ,
ಅತ್ತಿಗುಪ್ಪೆ, ವಿಜಯನಗರ ೨ನೇ ಹಂತ,
ಬೆಂಗಳೂರು - ೫೬೦೦೪೦. ದೂರವಾಣಿ: ೦೮೦-೨೩೩೯೬೬೧೫.
ಮಾರ್ಗ:
ಮೈಸೂರು ರಸ್ತೆಯಿಂದ ವೆಸ್ಟ್ ಆಫ್ ಕಾರ್ಡ್‌ರೋಡ್ ಕಡೆಗೆ ತಿರುಗಿದರೆ
ಅತ್ತಿಗುಪ್ಪೆ ಪೆಟ್ರೋಲ್ ಬಂಕ್‌ಗೆ ಮುನ್ನ ೨ನೇ ಮುಖ್ಯರಸ್ತೆಯಲ್ಲಿ ಕಾಣ
ಸಿಗುವುದೇ ಶ್ರೀಮತಿ ಮತ್ತು ಶ್ರೀ ಅಪ್ಪಯ್ಯಣ್ಣ ಕಲ್ಯಾಣ ಮಂಟಪ. ವಿಜಯನಗರದ
ಕಡೆಯಿಂದ ಬಂದರೆ ಅತ್ತಿಗುಪ್ಪೆಯ ಪೆಟ್ರೋಲ್ ಬಂಕ್ ನಂತರದ ರಸ್ತೆಯಲ್ಲಿ ಬಲಕ್ಕೆ
ತಿರುಗಿದರೆ ಸಾಕು.
ಹತ್ತಿರದ ಬಸ್ ನಿಲ್ದಾಣ:
ಅತ್ತಿಗುಪ್ಪೆ ಸ್ಟಾಪ್‌ನಲ್ಲಿ ಇಳಿಯಬೇಕು.
ಬಸ್ ಮಾರ್ಗ:
ಮೆಜೆಸ್ಟಿಕ್‌ನಿಂದ ೮೭,
೮೭ಎ, ೮೭ಬಿ,
೫೯ ಡಿ, ೫೯ ಇ,
೬೧ ಎ., ಕೆ.ಆರ್.
ಮಾರುಕಟ್ಟೆಯಿಂದ ೫೯, ೫೯ಸಿ,
೫೯ ಡಿ, ೫೯ ಇ,
೨೩೫ಎ, ೨೩೫ಡಿ,
೨೪೮, ೨೪೯. ಶಿವಾಜಿನಗರ
(ಯಶವಂತಪುರ ಮಾರ್ಗ) ೬೩ ಎ, ೬೪,
೧೯೫, ೪೦೧ಬಿ.,
ಮಲ್ಲೇಶ್ವರದಿಂದ ೭೫ ಬಿ, ೭೫
ಡಿ, ೧೭೬, ೨೭೯ಜಿ,
೩೦೦ಜಿ. ಕೋರಮಂಗಲದಿಂದ (ಲಾಲ್‌ಬಾಗ್- ಬನಶಂಕರಿ
ಮಾರ್ಗವಾಗಿ) ೧೭೦, ಜಯನಗರದಿಂದ ೬೦ಎ,
೬೦ಸಿ, ೬೦ ಇ,
೬೫ಬಿ., ಜೆ.ಪಿ.ನಗರದಿಂದ ೨೩ಎ,
ನಂದಿನಿ ಲೇಔಟ್ ಮತ್ತು ಬಿ.ಟಿ.ಎಂ. ಲೇಔಟ್‌ನಿಂದ ೨೦೦,
ಕತ್ತರಿಗುಪ್ಪೆಯಿಂದ ೨೦೫,
೨೦೫ಎ, ಟಿ೫, ಹಾಗೂ
೪೧೦.
CLICK
HERE FOR ENGLISH
|