|
ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪ
ಬನಶಂಕರಿ ೨ನೇ ಹಂತದಲ್ಲಿರುವ ಅತ್ಯಂತ ಕಡಿಮೆ ದರದ ಸುಂದರ ಕಲ್ಯಾಣ ಮಹಲ್
|
ಊಟದ ಹಾಲ್‌ನ ಆಸನಗಳ ಸಾಮರ್ಥ್ಯ |
275
|
|
ರಿಸೆಪ್ಷನ್ ಹಾಲ್‌ನ ಆಸನಗಳ ಸಾಮರ್ಥ್ಯ |
110
|
|
ಒಟ್ಟು ರೂಂಗಳ ಸಂಖ್ಯೆ
5, 2ರಲ್ಲಿ
ಅಟ್ಯಾಚ್ಡ್ ಬಾತ್ ಇದೆ. |
ಬನಶಂಕರಿ
ಎರಡನೇ ಹಂತದಲ್ಲಿರುವ ಕರೇಸಂದ್ರ,
ಬೆಂಗಳೂರಿನ ಅತ್ಯಂತ ಹಳೆಯ ಬಡಾವಣೆಗಳಲ್ಲಿ ಒಂದು. ಈ
ಬಡಾವಣೆಯಲ್ಲಿ ವಿವಾಹಾದಿ ಶುಭಕಾರ್ಯ ಮಾಡುವ ಕನ್ಯಾಪಿತೃಗಳಿಗೆ ಅನುಕೂಲ
ಮಾಡಿಕೊಡಲೆಂದೇ ಸಮಾಜ ಸೇವಕರಾದ ದಿವಂಗತ ಎನ್. ಪುಟ್ಟಲಕ್ಷ್ಮಮ್ಮ ಅವರು,
ನಿರ್ಮಿಸಿದ ಸುಂದರ ಹಾಗೂ ಸುಸಜ್ಜಿತವಾದ ಛತ್ರವೇ
ಶ್ರೀಲಕ್ಷ್ಮೀವೆಂಕಟೇಶ್ವರ ಕಲ್ಯಾಣ ಮಂಟಪ.
ಕರೇಸಂದ್ರದ ಶ್ರೀಲಕ್ಷ್ಮೀವೆಂಕಟೇಶ್ವರ ದೇವಾಲಯದ ಪಕ್ಕದಲ್ಲೇ ಇರುವ ಈ
ವಿಶಾಲವಾದ ಕಲ್ಯಾಣ ಮಂಟಪ ಸುಂದರವಾದ ವಾಸ್ತು ವಿನ್ಯಾಸದಿಂದ ಕೂಡಿದ್ದು,
ಮದುವೆ, ಮುಂಜಿ,
ನಿಶ್ಚಿತಾರ್ಥ, ಉಪನಯನ,
ಔತಣಕೂಟವೇ ಮೊದಲಾದ ಶುಭಕಾರ್ಯ ಮಾಡಲು ಅತ್ಯುತ್ತಮ
ತಾಣವಾಗಿದೆ.
ಅತ್ಯಂತ ಕಡಿಮೆ ಬಾಡಿಗೆಗೆ ದೊರಕುವ ಈ ಕಲ್ಯಾಣ ಮಂಟಪ ಕರೇಸಂದ್ರ,
ಜಯನಗರ, ನಾಗಸಂದ್ರ,
ಯಡೆಯೂರು, ಬನಶಂಕರಿ ಮೊದಲ,
ಎರಡನೇ ಹಾಗೂ ಮೂರನೇ ಹಂತ ಹಾಗೂ ಸುತ್ತಮುತ್ತಲ ಪ್ರದೇಶದ
ಮಧ್ಯಮ ವರ್ಗದ ನಾಗರಿಕರಿಗೆ ವರದಾನವಾಗಿ ಪರಿಣಮಿಸಿದೆ.
ಆಕರ್ಷಕವಾದ ಹೊರ ವಿನ್ಯಾಸದಿಂದ ಕೂಡಿರುವ ಈ ಕಲ್ಯಾಣ ಮಂಟಪದ ಸೌಂದರ್ಯ ರಾತ್ರಿಯ
ವೇಳೆ ವಿದ್ಯುತ್ ದೀಪಾಲಂಕಾರದಲ್ಲಿ ಮತ್ತಷ್ಟು ಮೆರಗು ಪಡೆಯುತ್ತದೆ. ಸಕಲ
ಆಧುನಿಕ ವ್ಯವಸ್ಥೆಗಳನ್ನು ಒಳಗೊಂಡ ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ
ಮಂಟಪದ ರಿಸೆಪ್‌ಷನ್ ಹಾಲ್ ಸಹ ಅತ್ಯಂತ ಮನಮೋಹಕವಾಗಿದ್ದು,
೨೭೫ ಆಸನಗಳ ಸಾಮರ್ಥ್ಯವನ್ನು ಹೊಂದಿದೆ. ಗಾಳಿ,
ಬೆಳಕಿನಿಂದ ಕೂಡಿದ ವಿಶಾಲವಾದ ಡೈನಿಂಗ್‌ಹಾಲ್‌ನಲ್ಲಿ
ಏಕಕಾಲದಲ್ಲಿ 110 ಮಂದಿ ಅತಿಥಿಗಳು ಕುರ್ಚಿಯ ಮೇಲೆ
ಕುಳಿತು ಊಟ ಮಾಡಲು ಅನುಕೂಲತೆ ಇದೆ.
ಈ
ಸುಸಜ್ಜಿತ ಕಲ್ಯಾಣ ಮಂಟಪದಲ್ಲಿ,
ಒಟ್ಟು ೫ರೂಂಗಳಿದ್ದು, ಎರಡು
ರೂಂಗಳಲ್ಲಿ ಅಟ್ಯಾಚ್ಡ್ ಬಾತ್‌ರೂಂ ಇದೆ. ಇದಲ್ಲದೆ ಪ್ರತ್ಯೇಕವಾದ ಶೌಚಗೃಹ
ಹಾಗೂ ಸ್ನಾನಗೃಹಗಳಿವೆ. ಬಿಸಿನೀರಿನ ವ್ಯವಸ್ಥೆಯೂ ಇದೆ.
ಶ್ರೀ
ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದ ಆಡಳಿತವನ್ನು ಪ್ರಸ್ತುತ ಶ್ರೀಲಕ್ಷ್ಮೀ
ವೆಂಕಟೇಶ್ವರ ಟೆಂಪಲ್ ಟ್ರಸ್ಟ್ ನಿರ್ವಹಿಸುತ್ತಿದ್ದು,
ಕಲ್ಯಾಣ ಮಂಟಪದ ಕಟ್ಟಡವನ್ನು ಅತ್ಯಂತ ಕಡಿಮೆ ದರಕ್ಕೆ
ಬಾಡಿಗೆಗೆ ನೀಡುತ್ತದೆ. ರಿಸೆಪ್‌ಷನ್‌ಹಾಲ್‌ನಲ್ಲಿ ಹಾಕುವ ಚೇರ್‌ಗಳು,
ಅಡುಗೆ ಮಾಡಲು ಅಗತ್ಯವಾದ ಪಾತ್ರೆ,
ವಿದ್ಯುತ್ ದೀಪಾಲಂಕಾರ,
ಪುಷ್ಪಾಲಂಕಾರ ಮೊದಲಾದ ಎಲ್ಲ ರೀತಿಯ ಸೌಲಭ್ಯಗಳನ್ನು ಪಡೆಯಲು ಸಂಬಂತ
ಸಂಸ್ಥೆಗಳೊಂದಿಗೆ ಸಂಪರ್ಕ ಕಲ್ಪಿಸುವ ಮೂಲಕ ಆಡಳಿತ ಮಂಡಳಿ ವಿವಾಹಾದಿ
ಶುಭಕಾರ್ಯ ಮಾಡುವವರಿಗೆ ನೆರವು ನೀಡುತ್ತದೆ. ಹೆಚ್ಚಿನ ವಿವರಗಳಿಗೆ ಈ ಕೆಳಕಂಡ
ವಿಳಾಸದಲ್ಲಿ ಕಲ್ಯಾಣ ಮಂಟಪದ ಆಡಳಿತ ಮಂಡಳಿಯನ್ನು ಸಂಪರ್ಕಿಸಬಹುದು.
ಶ್ರೀ ಲಕ್ಷ್ಮೀವೆಂಕಟೇಶ್ವರ ಕಲ್ಯಾಣ ಮಂಟಪದ ಪೂರ್ಣ ವಿಳಾಸ:
ನಂ.
3, 6ನೇ ಮೇನ್, 23ನೇ ಕ್ರಾಸ್,
ಕರೇಸಂದ್ರ, ಬನಶಂಕರಿ
2ನೇ ಹಂತ, ಬೆಂಗಳೂರು-560070,
ದೂರವಾಣಿ : 080-26712461.
26718967.
ಮಾರ್ಗ:
ಗಾಂಬಜಾರ್ ಕಡೆಯಿಂದ ಕೆ.ಆರ್. ರಸ್ತೆಯಲ್ಲಿ ಎಂ.ಎಂ. ಇಂಡಸ್ಟ್ರೀಸ್ ದಾಟಿ ಬಂದು
ಶಾಸ್ತ್ರೀಸ್ ಬೇಕರಿ ಬಳಿ ಬಲಕ್ಕೆ ತಿರುಗಿದರೆ,
ಎಡಭಾಗದಲ್ಲಿ ಶ್ರೀ ಲಕ್ಷ್ಮೀವೆಂಕಟೇಶ್ವರ ಕಲ್ಯಾಣ ಮಂಪಟ
ಕಾಣುತ್ತದೆ. ಮಾನೋಟೈಪ್‌ಬಳಿಯಿಂದ ಕುಮಾರಸ್ವಾಮಿ ಲೇಔಟ್‌ಗೆ ಹೋಗುವ
ರಸ್ತೆಯಲ್ಲಿ ವಿರುದ್ಧ ದಿಕ್ಕಿಗೆ ತುಸುವೆ ಮೇಲೆ ಬಂದು ನ್ಯಾಷನಲ್ ಕೋ
ಆಪರೇಟಿವ್ ಬ್ಯಾಂಕ್ ಪಕ್ಕದಲ್ಲಿ ಬಲಕ್ಕೆ ತಿರುಗಿದರೆ ಈ ಕಲ್ಯಾಣ ಮಂಟಪ
ತಲುಪಬಹುದು.
ಹತ್ತಿರದ ಬಸ್ ನಿಲ್ದಾಣ :
ಮಾನೋಟೈಪ್ (ಕಾಲ್ನಡಿಗೆಯ ಅಂತರ) ಅಥವಾ ಶಾಸ್ತ್ರೀ ಬೇಕರಿ ಸ್ಟಾಪ್
ಬಸ್ ಮಾರ್ಗ ಸಂಖ್ಯೆ:
ಮೆಜೆಸ್ಟಿಕ್‌ನಿಂದ ೧೨ ಎ,
೧೨ಬಿ, ೧೨ಸಿ,
೧೨ಡಿ, ೧೨ಇ,
೧೨ಎಫ್, ೧೫ಇ,
೧೫ಸಿ, ೧೫ಜಿ,
೧೫ಎಚ್. ಪುಷ್ಪಕ್ ೩೩, ಸಿಟಿ
ಮಾರುಕಟ್ಟೆಯಿಂದ ೧೫ಎ, ಬಿ,
ಸಿ. ಡಿ, ಇ,
ಎಫ್, ಜಿ,
ಎಚ್, ೨೧೦ಎ,
೨೧೦ ಎಚ್. ಶಿವಾಜಿನಗರದಿಂದ ೧೩,
೧೩ಬಿ, ಸಿ,
ಡಿ, ಇ,
ಎಫ್, ಜಿ,
ಎಚ್, ೧೮೨,
೧೮೩, ೧೨೦ಜಿ. ದೊಮ್ಮಲೂರಿನಿಂದ
೨೦೦, ೨೦೧, ಪುಷ್ಪಕ್
೩೮, ಯಶವಂತಪುರ ಮತ್ತು ಮಲ್ಲೇಶ್ವರದಿಂದ ೧೪೭,
೧೪೮, ಪುಷ್ಟಕ್ ೨೧,
ನಾಗಶೆಟ್ಟಿಹಳ್ಳಿಯಿಂದ ೨೮೯ಎಫ್.
ದೇವಾಲಯದಲ್ಲೂ ಮದುವೆ:
ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಲು ಶಕ್ತರಲ್ಲದ ಬಡವರ ಅನುಕೂಲಕ್ಕಾಗಿ ಶ್ರೀ
ಲಕ್ಷ್ಮೀವೆಂಕಟೇಶ್ವರ ಟ್ರಸ್ಟ್ ದೇವಾಲಯದಲ್ಲಿ ವಿವಾಹ ಮಾಡುವ ಸೌಲಭ್ಯವನ್ನೂ
ಕಲ್ಪಿಸಿದೆ. ವಿಶಾಲವಾದ ದೇವಾಲಯದ ಪ್ರಾಂಗಣದಲ್ಲಿ ಮದುವೆ ಮಾಡಲು ಅಗತ್ಯವಾದ
ನೆರವನ್ನು ಟ್ರಸ್ಟ್ ಮಾಡಿಕೊಡುತ್ತದೆ.
CLICK
HERE FOR ENGLISH
|